ಟ್ಯಾಂಗನ್ಯೀಕಾ ಸರೋವರ

ಅಂತರಿಕ್ಷದಿಂದ ಟ್ಯಾಂಗನ್ಯೀಕಾ ಸರೋವರದ ಒಂದು ನೋಟ

ಟ್ಯಾಂಗನ್ಯೀಕಾ ಸರೋವರವು ಆಫ್ರಿಕಾ ಖಂಡದ ಮಧ್ಯ ಭಾಗದಲ್ಲಿರುವ ಒಂದು ಬೃಹತ್ ಸರೋವರ. ಈ ಸರೋವರವು ಜಗತ್ತಿನಲ್ಲಿಯೇ ಎರಡನೆಯ ಅತಿ ದೊಡ್ಡ ಸಿಹಿನೀರಿನ ಸರಸ್ಸೆಂದು ಅಂದಾಜು ಮಾಡಲಾಗಿದೆ. ಅಲ್ಲದೆ ಇದು ಜಗತ್ತಿನಲ್ಲಿ ಎರಡನೆಯ ಅತ್ಯಂತ ಆಳವಾದ ಸರೋವರವು ಸಹ ಹೌದು. ಈ ಎರಡೂ ಮಾನದಂಡಗಳ ಪ್ರಕಾರ ಬೈಕಲ್ ಸರೋವರ ಮೊದಲನೆಯದಾಗಿದೆ. ಟ್ಯಾಂಗನ್ಯೀಕಾ ಸರೋವರವು ಆಫ್ರಿಕಾದ ನಾಲ್ಕು ರಾಷ್ಟ್ರಗಳಲ್ಲಿ ಹಂಚಿಹೋಗಿದೆ. ಅವೆಂದರೆ ಬುರುಂಡಿ, ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ, ಟಾಂಜಾನಿಯ ಮತ್ತು ಜಾಂಬಿಯ. ಇವುಗಳ ಪೈಕಿ ತಾಂಜಾನಿಯಾ ಮತ್ತು ಜಾಂಬಿಯಾಗಳಿಗೆ ಸರೋವರದ ನೀರಿನ ಸಿಂಹಪಾಲು ದಕ್ಕಿದೆ. ಈ ಸರೋವರವು ಜಗತ್ತಿನ ಮಹಾನದಿಗಳಲ್ಲಿ ಒಂದಾದ ಕಾಂಗೊ ನದಿಯ ಮೂಲಗಳಲ್ಲಿ ಒಂದಾಗಿದ್ದು ಸರಸ್ಸಿನ ನೀರು ಈ ನದಿಯ ಮೂಲಕ ಹರಿದು ಅಟ್ಲಾಂಟಿಕ್ ಮಹಾಸಾಗರವನ್ನು ಸೇರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು ೬೭೩ ಕಿ.ಮೀ. ಉದ್ದವಿರುವ ಈ ಮಹಾಸರೋವರದ ಅಗಲವು ಸರಾಸರಿ ೫೦ ಕಿ.ಮೀ.ಗಳಷ್ಟಿದೆ. ೩೨,೯೦೦ ಚದರ ಕಿ.ಮೀ. ವಿಸ್ತಾರವಾಗಿರುವ ಟ್ಯಾಂಗನ್ಯೀಕಾ ಸರೋವರದ ಸರಾಸರಿ ಆಳ ೫೭೦ ಮೀಟರ್ ಮತ್ತು ಅತ್ಯಧಿಕ ಆಳ ೧೪೭೦ ಮೀಟರ್ ಆಗಿದೆ. ಇದರಲ್ಲಿರುವ ಒಟ್ಟು ನೀರಿನ ಪ್ರಮಾಣ ಸುಮಾರು ೧೯೦೦೦ ಘನ ಕಿ.ಮೀ.ಗಳಷ್ಟೆಂದು ಅಂದಾಜಿಸಲಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Dieser Artikel basiert auf dem Artikel ಟ್ಯಾಂಗನ್ಯೀಕಾ ಸರೋವರ aus der freien Enzyklopädie Wikipedia und steht unter der Doppellizenz GNU-Lizenz für freie Dokumentation und Creative Commons CC-BY-SA 3.0 Unported (Kurzfassung). In der Wikipedia ist eine Liste der Autoren verfügbar.